ಬಶೀರ್ ರವರು ಕನ್ನಡದಲ್ಲಿ ಹನಿಗತೆ ಪ್ರಾಕಾರವನ್ನು ಸಮರ್ಥವಾಗಿ ಬಳಸುಸುತ್ತಿರುವರಲ್ಲಿ ಪ್ರಮುಖರು. ಜೊತೆಗೆ ಉತ್ತಮ ಕವಿಯೂ ಹೌದು. == ಬಾಲ್ಯ, ಜನನ ಮತ್ತು ವಿದ್ಯಾಭ್ಯಾಸ == ಬಶೀರ್ ರವರು ಮಂಗಳೂರಿನ ಬಳಿಯ ಉಪ್ಪಿನಂಗಡಿ ಸಮೀಪದ ಮಠ ಎಂಬಲ್ಲಿ ಜನಿಸಿದರು. ಉಪ್ಪಿನಂಗಡಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿ, ಮುಂಬಯಿ ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ, ಚಿನ್ನದ ಪದಕದೊಂದಿಗೆ ಎಂ.ಎ. ಪದವಿ ಪಡೆದರು. == ವೃತ್ತಿ ಜೀವನ == ಮುಂಬಯಿನ ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ೫ ವರ್ಷಗಳ ಕಾಲ ದುಡಿದ ನಂತರ ಜನವಾಹಿನಿ ಪತ್ರಿಕೆಯಲ್ಲಿ ಹಿರಿಯ ಸಂಪಾದಕರಾಗಿ ೫ ವರ್ಷ ಕೆಲಸ ಮಾಡಿದ್ದಾರೆ. ಪ್ರಸ್ತುತ "ವಾರ್ತಾ ಭಾರತಿ" ಕನ್ನಡ ದೈನಿಕದಲ್ಲಿ ಸುದ್ದಿ ಸಂಪಾದಕನಾಗಿ ಕಳೆದ ಹತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. == ಪುಸ್ತಕಗಳು == ಪ್ರವಾದಿಯ ಕನಸು (ಕವನ ಸಂಕಲನ) ಬಾಳೆಗಿಡ ಗೊನೆ ಹಾಕಿತು (ಕಥಾ ಸಂಕಲನ) ಅಂಗೈಯಲ್ಲಿ ಆಕಾಶ (ಹನಿಗತೆಗಳ ಸಂಕಲನ) ಬಾಡೂಟದ ಜೊತೆಗೆ ಗಾಂಧೀ ಜಯಂತಿ (ಲೇಖನಗಳ ಸಂಗ್ರಹ) ನನ್ನ ಮಸೀದಿ ಧ್ವಂಸಗೈದವರಿಗೆ ಕೃತಜ್ಞ-ಸೂಫಿ ಕಣ್ಣಲ್ಲಿ ಹನಿಗಳು(ಹನಿ ಕವಿತೆಗಳು) ಅಮ್ಮ ಹಚ್ಚಿದ ಒಲೆ(ಕವನ ಸಂಕಲನ) == ಪ್ರಶಸ್ತಿ ಮತ್ತು ಗೌರವ == ಮುದ್ದಣ ಕಾವ್ಯ ಪ್ರಶಸ್ತಿ. ಮೈಸೂರು ಚದುರಂಗ ಪ್ರತಿಷ್ಥಾನ ಪ್ರಶಸ್ತಿ. ಲಂಕೇಶ್ ಪ್ರಶಸ್ತಿ. == ಉಲ್ಲೇಖ ==